ಮರೀನಾ ಇಕ್ಬಾಲ್ (ಜನನ ೭ ಮಾರ್ಚ್ ೧೯೮೭) ಒಬ್ಬ ಪಾಕಿಸ್ತಾನಿ ಕ್ರಿಕೆಟ್ ವಿಮರ್ಶಕಿ ಮತ್ತು ಮಾಜಿ ಕ್ರಿಕೆಟಿಗರು. ಅವರು ಬಲಗೈ ಮಧ್ಯಮ-ವೇಗದ ಬೌಲರ್ ಮತ್ತು ಬಲಗೈ ಬ್ಯಾಟರ್ ಆಗಿ ಆಡಿದ್ದರು. ಅವರು ೨೦೦೯ ಮತ್ತು ೨೦೧೭ ರ ನಡುವೆ ಪಾಕಿಸ್ತಾನಕ್ಕಾಗಿ ೩೬ ಏಕದಿನ ಅಂತಾರಾಷ್ಟ್ರೀಯ ಮತ್ತು ೪೨ ಟ್ವೆಂಟಿ೨೦ - ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡರು. ಅವರು ಲಾಹೋರ್, ಜರೈ ತಾರಾಕಿಯಾತಿ ಬ್ಯಾಂಕ್ ಲಿಮಿಟೆಡ್, ಪಂಜಾಬ್, ಒಮರ್ ಅಸೋಸಿಯೇಟ್ಸ್, ಸೈಫ್ ಸ್ಪೋರ್ಟ್ಸ್ ಸಾಗಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನಕ್ಕಾಗಿ ದೇಶೀಯ ಕ್ರಿಕೆಟ್ ಆಡಿದರು . == ವೃತ್ತಿ == === ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು === ಇಕ್ಬಾಲ್ ಅವರು ಮೇ ೨೦೦೯ ರಲ್ಲಿ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಏಕದಿನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. === ಟ್ವೆಂಟಿ೨೦ ಅಂತರಾಷ್ಟ್ರೀಯ ಪಂದ್ಯಗಳು === ಇಕ್ಬಾಲ್ ಅವರು ಮೇ ೨೦೦೯ ರಲ್ಲಿ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಟ್ವೆಂಟಿ೨೦ ಅಂತರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. ==== ೨೦೧೦ ==== ಮರೀನಾ ಅವರು ೨೦೧೦ ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಪಾಕಿಸ್ತಾನ ತಂಡದ ಭಾಗವಾಗಿದ್ದರು. == ಉಲ್ಲೇಖಗಳು ==